ಏಯ್, ಮರ್ಯಾದೆಯಿಂದ ವಾಪಸ್ ಹೋಗೋ : ಪಿಎಸ್ಐಗೆ ಆವಾಜ್ ಹಾಕಿದ ಎಂ.ಪಿ.ಕುಮಾರಸ್ವಾಮಿ.

99
firstsuddi

ಚಿಕ್ಕಮಗಳೂರು : ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಪೊಲೀಸ್ ಅಧಿಕಾರಿ ಒಬ್ಬರಿಗೆ ಬಾಯಿಗೆ ಬಂದಂತೆ ಬೈದಿರುವ ಆಡಿಯೋ ವೈರಲ್ ಆಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ರವೀಶ್ ಗೆ ಆವಾಜ್ ಹಾಕಿದ್ದು, ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ, ಮರ್ಯಾದೆಯಿಂದ ವಾಪಸ್ ಹೋಗೋ ಲೇ, ನಾಳೆನೇ ನಿನ್ನ ಎತ್ತಂಗಡಿ ಮಾಡಿಸ್ತೇನೆ ಎಂದು ಗದರಿದ್ದಾರೆ.

ಶಾಸಕ-ಇನ್ಸ್ ಪೆಕ್ಟರ್ ನಡುವಿನ ಮಾತುಕತೆ ಹೀಗಿದೆ:
ಶಾಸಕ : ಹಲೋ ಯಾರಪ್ಪಾ ಇದು ನಂಬರು
ಪಿಎಸ್ಐ : ಸರ್, ನಾನು ರವೀಶ್ ಮಾತಾಡೋದು ಸಾರ್

ಶಾಸಕ : ಈಗ ಎಲ್ಲಿದ್ದೀಯಾ…
ಪಿಎಸ್ಐ : ಸ್ಟೇಷನ್ ನಲ್ಲಿ ಇದೀನಿ ಸರ್…

ಶಾಸಕ : ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು.
ಪಿಎಸ್ಐ : ಐಜಿ ಸರ್ ಫೋನ್ ಮಾಡಿ ಹೇಳಿದ್ರು ಸರ್, ಚಾರ್ಜ್ ತಗೋಳಿ ಹೋಗಿ ಅಂತ.

ಶಾಸಕ : ಸ್ಟೇಷನ್ ನಲ್ಲಿ ಇರಬೇಡ… ಏಯ್, ಮರ್ಯಾದೆಯಿಂದ ವಾಪಸ್ ಹೋಗಲೇ, ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ.
ಪಿಎಸ್ಐ : ಸರ್ ಹಾಗೇನಿಲ್ಲ ಸರ್, ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್, ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್.

ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು, ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು, ನಿಮ್ಮದು ನಡಿಯಲ್ಲ, ಎಷ್ಟು ಲಂಚ ಕೊಟ್ಟಿದ್ದೀಯಾ, ಐಜಿಗೆ – ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ.
ಪಿಎಸ್ಐ : ಸರ್ ಆ ರೀತಿ ಏನಿಲ್ಲ ಸರ್ ನಾನೇನು ಕೊಟ್ಟಿಲ್ಲ ಸರ್

ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು.
ಪಿಎಸ್ಐ : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್.
ಶಾಸಕ : ಯಾವನೋ ಐಜಿ, ಮೂಡಿಗೆರೆಗೆ ಎಲ್ಲ ನಾನೇ, ಅವನಿಗೆ ಹೇಳು ಐಜಿಗೆ. ಮರ್ಯಾದೆಯಿಂದ ವಾಪಸ್ ಹೋಗು, ಬಂದ್ರೆ ಒದ್ದು ಓಡಿಸುತ್ತೇನೆ.