ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಶ್ನೆಯೊಂದನ್ನ ಎತ್ತಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಶನಿವಾರದಂದು ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆಗೆ ಎರಡು ದಿನ ಬೇಕೆ ಬಲ್ಲವರು ತಿಳಿಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಅವರು ಹೀಗೆ ಯಾಕೆ ಕೇಳಿದ್ದಾರೆ? ಇದರ ಹಿಂದಿನ ಮರ್ಮವೇನು? ಹೀಗೆ ನಾನಾ ಆಯಾಮಗಳಲ್ಲಿ ಸಾರ್ವಜನಕರಲ್ಲಿ ಪ್ರಶ್ನೆಗಳ ಜೊತಗೆ ಚರ್ಚೆಗಳು ಸಹ ಶುರುವಾಗಿವೆ.










