ಕಳಸ : ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಕ್ಕಿ ಗ್ರಾಮದ ಪರಿಶಿಷ್ಟ ಕಾಲೋನಿಗೆ ಮಾಡಿದ ಕಾಮಾಗಾರಿಗಳಲ್ಲಿ ಅವ್ಯವಹಾರವಾಗಿದ್ದು ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪರಿಶಿಷ್ಟ ಕಾಲೋನಿಯ ಗ್ರಾಮಸ್ಥರು ಇಂದು ಇಡಕಣಿ ಗ್ರಾಮ ಪಂಚಾಯಿತಿ ಮುಂಬಾಗ ಪ್ರತಿಭಟನೆ ನಡೆಸಿದರು.
ಹೆಮ್ಮಕ್ಕಿ ಗ್ರಾಮದ ಪರಿಶಿಷ್ಟ ಕಾಲೋನಿಯ ಭದ್ರಕಾಳಿ ಸಮುದಾಯ ಭವನದ ಆವರಣಕ್ಕೆ ಇಂಟರ್ ಲಾಕ್ ಅಳವಡಿಸಲು ಮೂರು ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ ಇಲ್ಲಿ ಕಾಮಗಾರಿಯನ್ನು ಮಾಡದೆ ಬಿಲ್ಲು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮೂಡಿಗೆರೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗೆ ಕಳೆದ ಹದಿನೈದು ದಿನದ ಹಿಂದೆ ಮನವಿಯನ್ನು ನೀಡಿದ್ದೇವೆ. ಅದಕ್ಕೆ ಯಾವುದೇ ಉತ್ತರವೂ ಬಂದಿಲ್ಲ.
ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಹಸಿ ಕಸ ಮತ್ತು ಒಣಕಸ ಹಾಕಲು ಎರಡು ಬಕೇಟುಗಳನ್ನು ವಿತರಿಸಬೇಕಿತ್ತು. ಆದರೆ ಇಡಕಣಿ ಗ್ರಾಮ ಪಂಚಾಯಿತಿಯಿಂದ ಕೇವಲ ಒಂದೊಂದು ಬಕೇಟುಗಳನ್ನು ವಿತರಿಸಲಾಗಿದೆ. ಮಾಗ ಸಂಪಿಗೆಮಕ್ಕಿ ಗ್ರಾಮದ ಪರಿಶಿಷ್ಟ ಕಾಲೋನಿಗೆ ಮೋರಿ ನಿರ್ಮಾಣ ಹಾಗೂ ಬರ್ಗಲ್ ಹರಿಜನ ಕಾಲೋನಿಗೆ ಮೋರಿ ನಿರ್ಮಾಣದಲ್ಲು ಅವ್ಯಹಾರ ನಡೆದಿದೆ ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು.
ಅಲ್ಲದೆ ವರ್ಷ ಪೂರ್ತಿ ಮಳೆ ಸುರಿದರೂ ಕೂಡ ಇಡಕಣಿ ಮತ್ತು ಹೆಮ್ಮಕ್ಕಿ ಪರಿಶಿಷ್ಟ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರವನ್ನು ನೀಡಲು ಯಾರಿಂದಲೂ ಸಾದ್ಯವಾಗಲಿಲ್ಲ. ಹೆಮ್ಮಕ್ಕಿಯಲ್ಲಿ ಪಡಿತರ ವಿತರಣಾ ಕೇಂದ್ರವನ್ನು ತೆರೆಯಬೇಕು ಎನ್ನುವ ಮನವಿಗೆ ಈವರೆಗೂ ಸ್ಪಂದಿಸಿಲ್ಲ.ಪರಿಶಿಷ್ಟ ಜಾತಿ ಕಾಲೋನಿಗೆ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಹಿರೇಬೈಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‍ಗಳ ಕೊರತೆಯಿಂದ ಬಡ ಕೂಲಿ ಕಾರ್ಮಿಕರಿಗೆ ಸಾಕಷ್ಟು ತೊಂದರೆಗಳು ಉಂಟಾಗಿದೆ. ಕೂಡಲೇ ಇಲ್ಲಿಯ ಆಸ್ಪತ್ರೆಗೆ ವೈದ್ಯರು ಮತ್ತು ಸಿಬ್ಬಂದಿಗಳ ನೆಮಕವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಎನ್‍ಆರ್‍ಜಿ ಅಸಿಸ್ಟೆಂಟ್ ಡೈರೆಕ್ಟರ್ ಪ್ರಕಾಶ್ ಗ್ರಾಮಸ್ಥರ ಅವಹಾಲನ್ನು ಸ್ವೀಕರಿಸಿ ಕಾಮಗಾರಿಯಲ್ಲಿ ಅವ್ಯಹಾರಗಳು ನಡೆದಿದ್ದಲ್ಲಿ ಕೂಡಲೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಒಂದು ಬಕೇಟ್ ನೀಡಲಾಗಿದೆ. ಇನ್ನೊಂದು ಬಕೇಟ್ ಕೊಡುವ ವ್ಯವಸ್ಥೆ ಮಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಿರೀಶ್, ಮಂಜಯ್ಯ, ಪ್ರವೀಣ್, ಸುಂದರೇಶ್, ಶಿವಣ್ಣ, ಜಿನ್ನಯ್ಯ, ನಾಗರಾಜ, ಸುರೇಶ್ ಇತರರು ಇದ್ದರು.
Home ಸ್ಥಳಿಯ ಸುದ್ದಿ ಕಳಸ : ಇಡಕಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯಲ್ಲಿ ಅವ್ಯವಹಾರ – ತನಿಖೆಗೆ ಗ್ರಾಮಸ್ಥರ ಆಗ್ರಹ…










