ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ – ಯಾವ ಕ್ಷೇತ್ರಕ್ಕೆ ಯಾರು?

78
firstsuddi

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿಂದ 42 ಮಂದಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ.

ಕಳೆದ ಮಾರ್ಚ್ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.

ಕಾಂಗ್ರೆಸ್ ಹೈಕಮಾಂಡ್ ಕೋಲಾರಕ್ಕೆ ಟಿಕೆಟ್ ಪ್ರಕಟಿಸಿಲ್ಲ. ಇತ್ತ ಹಾಲಿ ಶಾಸಕ ವಿ ಮುನಿಯಪ್ಪ ಕ್ಷೇತ್ರ ಶಿಡ್ಲಘಟ್ಟ ಕೂಡ ಘೋಷಣೆ ಆಗಿಲ್ಲ. ಎಡರನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರಿಗೆ ಕೊಕ್ ನೀಡಲಾಗಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ.

ಯಾವ ಕ್ಷೇತ್ರಕ್ಕೆ ಯಾರು?: ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್, ಗೋಕಾಕ್- ಮಹಾಂತೇಶ್ ಕಡಾಡಿ, ಕಿತ್ತೂರು- ಬಾಬಾ ಸಾಹೇಬ್ ಡಿ ಪಾಟೀಲ್, ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವಿದ್ಯಾ, ಮುಧೋಳ್ ಎಸ್ಸಿ- ರಾಮಪ್ಪ ಬಾಳಪ್ಪ ತಿಮ್ಮಾಪೂರ್, ಬಿಳಗಿ- ಜಿ.ಟಿ ಪಾಟೀಲ್, ಬಾದಾಮಿ- ಭೀಮಸೇನಾ ಬಿ ಚಿಮ್ನಕಟ್ಟಿ, ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ, ಬಿಜಾಪುರ ನಗರ – ಅಬ್ದುಲ್ ಅಹ್ಮದ್ ಖಾಜಸಾಹೇಬ್ ಮುಷರಫಿ, ನಾಗಠಾಣ ಎಸ್ಸಿ- ವಿಠಲ್ ಕಟಕದೋಂಧ್, ಅಫ್ಜಲಪುರ್- ಎಂವೈ ಪಾಟೀಲ್, ಯಾದಗಿರಿ- ಚನ್ನ ರೆಡ್ಡಿ ಪಾಟೀಲ್, ಗುರುಮಿಠ್ಕಲ್- ಚಿಂಚನಸೂರ್, ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ್, ಬಸವಕಲ್ಯಾಣ – ವಿಜಯ್ ಧರ್ಮಸಿಂಗ್, ಗಂಗಾವತಿ – ಇಕ್ಬಾಲ್ ಅನ್ಸಾರಿ, ನರಗುಂದ- ಬಿ.ಆರ್ ಯಾವಗಲ್, ಧಾರವಾಡ- ವಿನಯ್ ಕುಲಕರ್ಣಿ, ಕಲಘಟಗಿ- ಸಂತೋಷ್ ಎಸ್ ಲಾಡ್.

ಸಿರಸಿ- ಭಿಮಣ್ಣ ನಾಯಕ್, ಯಲ್ಲಾಪುರ- ವಿಎಸ್ ಪಾಟೀಲ್, ಕೂಡ್ಲಿಗಿ- ಶ್ರೀನಿವಾಸ್ ಎನ್.ಟಿ, ಮೊಳಕಾಲ್ಮೂರು- ಎನ್ ವೈ ಗೋಪಾಲಕೃಷ್ಣ, ಚಿತ್ರದುರ್ಗ- ಕೆ.ಸಿ ವೀರೇಂದ್ರ, ಹೊಳಲ್ಕೆರೆ- ಹೆಚ್. ಆಂಜನೇಯ, ಚನ್ನಗಿರಿ- ಬಿ.ವಿ ಶಿವಗಂಗಾ, ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್, ಉಡುಪಿ- ಪ್ರಸಾದ್ ರಾಜ್ ಕಾಂಚಾನ, ಕಡೂರು- ಕೆ.ಎಸ್ ಆನಂದ್, ತುಮಕೂರು ನಗರ, ಇಕ್ಬಾಲ್ ಅಹ್ಮದ್, ಗುಬ್ಬಿ- ಎಸ್.ಆರ್ ಶ್ರೀನಿವಾಸ್, ಯಲಹಂಕ- ಕೇಶವ ರಾಜಣ್ಣ ಬಿ, ಯಶವಂತಪುರ- ಎಸ್ ಬಾಲರಾಜ್ ಗೌಡ, ಮಹಾಲಕ್ಷ್ಮಿ ಲೇ ಔಟ್- ಕೇಶವಮೂರ್ತಿ, ಪದ್ಮನಾಭನಗರ- ರಘುನಾಥ ನಾಯ್ಡು, ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ- ಪಿ. ರವಿಕುಮಾರ್, ಕೆ ಆರ್ ಪೇಟೆ- ಬಿ.ಎಲ್ ದೇವರಾಜ್, ಬೇಲೂರು- ಬಿ. ಶಿವರಾಂ, ಮಡಿಕೇರಿ- ಮಂಥರ್ ಗೌಡ, ಚಾಮುಂಡೇಶ್ವರಿ- ಸಿದ್ದೇಗೌಡ, ಕೊಳ್ಳೇಗಾಲ- ಎ. ಆರ್ ಕೃಷ್ಣಮೂರ್ತಿ.