ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಕಾಂಗ್ರೆಸ್, 2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿತ್ತು. ಇಂದು ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಇರಿಸಿಕೊಂಡಿದೆ. 43 ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಕೋಲಾರದಿಂದ ಸಿದ್ದರಾಮಯ್ಯಗೆ ಟಿಕೆಟ್ ನಿರಾಕರಿಸಲಾಗಿದ್ದು, ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್ ಆದಂತಾಗಿದೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಹಾರಿದ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ತೆರದಾಳದಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್ ಸಿಕ್ಕಿದೆ.
ಮೂರನೇ ಪಟ್ಟಿ ಇಂತಿದೆ:
ಅರಭಾವಿ -ಅರವಿಂದ ದಳವಾಯಿ, ಕೋಲಾರ – ಕೊತ್ತೂರು ಮಂಜುನಾಥ, ಚಿಕ್ಕಪೇಟೆ -ಆರ್.ವಿ.ದೇವರಾಜ್, ಅರಸೀಕೆರೆ- ಕೆ.ಎಂ.ಶಿವಲಿಂಗೇಗೌಡ, ಬೊಮ್ಮನಹಳ್ಳಿ -ಉಮಾಪತಿ ಶ್ರೀನಿವಾಸಗೌಡ, ಕುಂದಗೋಳ -ಕುಸುಮಾ ಶಿವಳ್ಳಿ, ರಾಯಬಾಗ -ಮಹಾವೀರ ಮೋಹಿತ್, ಬೆಳಗಾವಿ ಉತ್ತರ -ಆಸೀಫ್ ಸೇಠ್, ಬೆಳಗಾವಿ ದಕ್ಷಿಣ -ಪ್ರಭಾವತಿ ಮಾಸ್ತಿ ಮರಡಿ, ತೇರದಾಳ -ಸಿದ್ದಪ್ಪ ರಾಮಪ್ಪ ಕೊಣ್ಣೂರು, ದೇವರಹಿಪ್ಪರಗಿ -ಶರಣಪ್ಪ ಟಿ.ಸುಣಗಾರ, ಮೂಡಿಗೆರೆ -ನಯನಾ ಜ್ಯೋತಿ ಜವಾರ್(ಮೋಟಮ್ಮ ಪುತ್ರಿ), ಸಿಂದಗಿ -ಅಶೋಕ ಎಂ.ಮನಗೂಳಿ, ಕಲಬುರಗಿ ಗ್ರಾಮಾಂತರ -ರೇವೂನಾಯ್ಕ್ ಬೆಳಮಗಿ, ಔರಾದ್ -ಡಾ.ಶಿಂಧೆ ಭೀಮಸೇನ್ ರಾವ್, ಮಾನ್ವಿ -ಜಿ.ಹಂಪಯ್ಯ ನಾಯಕ, ದೇವದುರ್ಗ -ಶ್ರೀದೇವಿ ಆರ್.ನಾಯಕ, ಸಿಂಧನೂರು -ಹಂಪನಗೌಡ ಬಾದರ್ಲಿ, ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ ನವಲಗುಂದ -ಎನ್.ಹೆಚ್.ಕೋನರೆಡ್ಡಿ, ಕುಮಟಾ -ನಿವೇದಿತ್ ಆಳ್ವಾ, ಸಿರುಗುಪ್ಪ -ಬಿ.ಎಂ.ನಾಗರಾಜ್ಬಳ್ಳಾರಿ ನಗರ -ಭರತ್ ರೆಡ್ಡಿ, ಜಗಳೂರು -ಬಿ.ದೇವೇಂದ್ರಪ್ಪ, ಹರಪನಹಳ್ಳಿ -ಎನ್.ಕೊಟ್ರೇಶ್, ಹೊನ್ನಾಳಿ -ಡಿ.ಜಿ.ಶಾಂತನಗೌಡ, ಶಿವಮೊಗ್ಗ ಗ್ರಾಮಾಂತರ -ಡಾ.ಶ್ರೀನಿವಾಸ ಕರಿಯಣ್ಣ, ಶಿವಮೊಗ್ಗ ನಗರ -ಹೆಚ್.ಸಿ.ಯೋಗೇಶ್, ಶಿಕಾರಿಪುರ -ಜಿ.ಬಿ.ಮಾಲ್ತೇಶ್, ಕಾರ್ಕಳ -ಉದಯ್ ಶೆಟ್ಟಿ, ತರೀಕೆರೆ -ಜಿ.ಹೆಚ್.ಶ್ರೀನಿವಾಸ
ತುಮಕೂರು ಗ್ರಾಮಾಂತರ -ಜಿ.ಹೆಚ್.ಷಣ್ಮುಖಪ್ಪ ಯಾದವ್, ಚಿಕ್ಕಬಳ್ಳಾಪುರ -ಪ್ರದೀಪ್ ಈಶ್ವರ್ ಅಯ್ಯರ್, ದಾಸರಹಳ್ಳಿ -ಧನಂಜಯ ಗಂಗಾಧರಯ್ಯ, ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್, ಚನ್ನಪಟ್ಟಣ -ಎಸ್.ಗಂಗಾಧರ್, ಮದ್ದೂರು -ಕೆ.ಎಂ.ಉದಯ್, ಹಾಸನ -ಬನವಾಸಿ ರಂಗಸ್ವಾಮಿ,ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್ ರಿಚರ್ಡ್ ಲೋಬೋ, ಪುತ್ತೂರು -ಅಶೋಕ್ ಕುಮಾರ್ ರೈ, ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್, ಮೈಸೂರಿನ ಚಾಮರಾಜ ಕ್ಷೇತ್ರ- ಕೆ.ಹರೀಶ್ ಗೌಡ.










