ಕಾಂಗ್ರೆಸ್​ನವರು ಆರೋಪ ಮಾಡ್ತಾರೆ, ದಾಖಲಾತಿ ಕೇಳಿದ್ರೆ ಓಡಿ ಹೋಗ್ತಾರೆ : ಆರಗ ಜ್ಞಾನೇಂದ್ರ.

65
firstsuddi

ಕಲಬುರಗಿ : ದಾಖಲಾತಿ ಕೇಳಿದರೆ ಓಡಿಹೋಗುವುದು ಕಾಂಗ್ರೆಸ್ ಕೆಲಸವಾಗಿದೆ. ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್ ನವರು. ತನಿಖೆ ಸರಿಯಾಗಿ ನಡೆದರೆ ತಮ್ಮ ಬುಡಕ್ಕೆ ಬರುತ್ತದೆ ಎನ್ನುವುದು ಗೊತ್ತಾಗಿ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ, ಸಿದ್ದರಾಮಯ್ಯ 300 ಕೋಟಿ ಅಲ್ಲ 3,000 ಕೋಟಿ ಆರೋಪ ಮಾಡಲಿ, ಮಾತನಾಡುವುದಕ್ಕೆ ಅವರಿಗೆ ವಾಕ್ ಸ್ವಾತಂತ್ರವಿದೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನವರು ಆರೋಪ ಮಾಡುತ್ತಾರೆ, ದಾಖಲಾತಿ ಕೇಳಿದರೆ ಓಡಿಹೋಗುತ್ತಾರೆ. ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ, ತನಿಖೆಯ ದಿಕ್ಕೂ ತಪ್ಪಿಸುವುದೊಂದೇ ಇವರ ಉದ್ದೇಶ. ಸದ್ಯ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಲು ಆಗದಂತೆ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.