ಕಾರು ಹರಿದು ನಾಲ್ಕು ವರ್ಷದ ಕಂದಮ್ಮ ಸಾವು.. ಗಾಯಗೊಂಡ ಗರ್ಭಿಣಿ…

85
firstsuddi

ಹೊಸಪೇಟೆ(ವಿಜಯನಗರ) : ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕಾರು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗರ್ಭಿಣಿ(ಸಾವನ್ನಪ್ಪಿದ ಮಗುವಿನ ತಾಯಿ) ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಹನುಮಂತ(4) ಮೃತಪಟ್ಟ ಮಗು. ಕುಂಚೂರು ಗ್ರಾಮದ ಕೋಟೆಪ್ಪ ಮತ್ತು ರೂಪ ದಂಪತಿಗೆ ಸೇರಿದ ಮಗುವಾಗಿದೆ. ಸರ್ಕಾರಿ ಆಸ್ಪತ್ರೆಯ ನೌಕರ ರವಿ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.

ಘಟನೆ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.