ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆ…

249

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ನಾಗಣ್ಣ ಅವರು ನಿರ್ದೇಶನ ಮಾಡಿರುವ ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್, ಅರ್ಜುನನಿಗೆ ಸಾರಥಿಯಾಗಿ ಕೃಷ್ಣ(ರವಿಚಂದ್ರನ್), ಭೀಷ್ಮ(ಅಂಬರೀಶ್), ಕರ್ಣ(ಅರ್ಜುನ್ ಸರ್ಜಾ), ಶಕುನಿ(ರವಿಶಂಕರ್), ಧರ್ಮರಾಯ(ಶಶಿಕುಮಾರ್), ದ್ರೌಪದಿ(ಸ್ನೇಹ), ಹಾಗೂ ಕುಂತಿ ಪಾತ್ರದಲ್ಲಿ(ಭಾರತಿ ವಿಷ್ಣುವರ್ಧನ್) ಅವರು ನಟಿಸಿದ್ದಾರೆ. ನಿರ್ಮಾಪಕ ಮುನಿರತ್ನ ಅವರು ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದು,  ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.