ಮೂಡಿಗೆರೆ: ಬಿಳಗುಳ ಸಾರ್ವಜನಿಕ ಶ್ರೀ ಮಹಾಗಣಪತಿ ಸಮಿತಿ ವತಿಯಿಂದ ಮಹಿಳೆಯರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಗ್ರಾಮದ ಮಹಿಳೆಯರು ಭಾಗವಹಿಸಿ ರಸಪ್ರಶ್ನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಶಾಂತಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿರ್ವಹಣೆಯನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಲಕ್ಷ್ಮಣ್ ರವರು ಮತ್ತು ಅಂಗಡಿ ಪ್ರೌಢಶಾಲಾ ಶಿಕ್ಷಕರಾದ ಮಹಾಮನಿ ಯವರು ಯಶಸ್ವಿಯಾಗಿ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಗಜಾನನ, ವಿನಾಯಕ, ಮಹಾಗಣಪತಿ, ಸುಮುಖ, ಲಂಬೋದರ, ಮತ್ತು ಏಕದಂತ ಎಂಬ 6 ತಂಡಗಳನ್ನು ರಚಿಸಿ ತಂಡದಲ್ಲಿ ತಲಾ ನಾಲ್ಕು ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 9 ಸುತ್ತುಗಳಿದ್ದು, ಗಾದೆಗಳು, ಒಗಟುಗಳು, ಹಬ್ಬಗಳ ಆಚರಣೆ, ಸಿನಿಮಾ, ದಾರಾವಾಹಿ, ಸೇರಿದಂತೆ ವಿನಾಯಕನಿಗೆ ಸಂಬಂಧಪಟ್ಟಂತೆ ಒಟ್ಟು ಒಂಬತ್ತು ಸುತ್ತುಗಳಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲಾ ಸ್ಪರ್ದಾಳುಗಳು ಅತ್ಯುತ್ತಮವಾಗಿ ಉತ್ತರಿಸಿದರು. ಸ್ಪರ್ಧೆಯಲ್ಲಿ ವಿನಾಯಕ ತಂಡ ಪ್ರಥಮ ಸ್ಥಾನ, ಹಾಗೂ ಸುಮುಖ, ಮಹಾಗಣಪತಿ ತಂಡಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿರುತ್ತಾರೆ.










