ಕೆಲವೇ ದಿನಗಳಲ್ಲಿ ಮೈತ್ರಿ ಸರ್ಕಾರ ಬೀಳುವುದು ನಿಶ್ಚಿತ : ಬಿ.ಎಸ್. ಯಡಿಯೂರಪ್ಪ…

199
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆ ಬಗ್ಗೆ ಪ್ರತಿಕ್ರಯಿಸಿದ್ದು, ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡುವುದಾಗಿ ತಿಳೀಸಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನ ಉಳಿದ ಶಾಸಕರು ರಾಜೀನಾಮೆ ನೀಡದಂತೆ ತಡೆಯಲು ಮಾಡಿರುವ ಷಡ್ಯಂತ್ರ ಇದು. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ಬಹುಮತ ಸಿಗುವುದಿಲ್ಲ. ಇದರಿಂದ ವಿಶ್ವಾಸ ಮತಯಾಚನೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಈ ಮೈತ್ರಿ ಸರ್ಕಾರ ಇನ್ನೂ ಕೆಲವೇ ದಿನಗಳಲ್ಲಿ ಬೀಳುವುದು ನಿಶ್ಚಿತ. ಈಗಿರುವ ಸರ್ಕಾರದ ವಾತಾವರಣ ನಮಗೆ ಅನುಕೂಲಕರವಾಗಿದ್ದರೂ, ಕುಮಾರಸ್ವಾಮಿ ಅವರು ವಿಶ್ವಾಸ ಮಾತಯಾಚನೆ ಮಾಡುವ ಧೈರ್ಯ ಹೊಂದಿದ್ದಾರೆ. ನಾವು ಅದನ್ನು ಕೂಡಾ ಸ್ವಾಗತಿಸುತ್ತೇವೆ ಎಂದರು.