ಮೂಡಿಗೆರೆ : ಕೊಟ್ಟಿಗೆಹಾರ ಮುಖ್ಯ ರಸ್ತೆಯ ರಾಮ್ಪ್ರಸಾದ್ ಜನರಲ್ ಸ್ಟೋರ್ಸ್ ಬಳಿ ಇರುವ ವಿದ್ಯತ್ ಕಂಬಕ್ಕೆ ವಿದ್ಯುತ್ ತಂತಿ ಜೊತೆಗೆ ಹತ್ತಾರು ಕೇಬಲ್ ವಯರ್ಗಳು, ಟೆಲಿಫೋನ್ ವಯರ್ಗಳು ಸುತ್ತಿಕೊಂಡು ವಿದ್ಯುತ್ ಕಂಬನಾ ಅಥವಾ ಜೇಡರ ಬಲೆಯಾ ಎಂಬುವುದು ತಿಳಿಯದಾಗಿದೆ. ಕೇಬಲ್ಗಳು ಕೆಳಗಡೆ ಜೋತಾಡುವುದರಿಂದ ದಿನನಿತ್ಯ ಧರ್ಮಸ್ಥಳ ಹಾಗೂ ಮಂಗಳೂರು ಕಡೆ ಓಡಾಡುವ ಪ್ರವಾಸಿಗರು ವಾಹನವನ್ನು ಇದರ ಬದಿಯಲ್ಲೇ ನಿಲ್ಲಿಸುತ್ತಾರೆ. ಸಾರ್ವಜನಿಕರಿಗೆ ಅಪಾಯ ಆಗಬಹುದು ಎಂದು ಕೇಬಲ್ ಆಪರೇಟರ್, ಮೆಸ್ಕಾಂ ಹಾಗೂ ದೂರವಾಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಏನಾದರೂ ಅನಾಹುತ ಆಗುವ ಮೊದಲು ಎಚ್ಚೆತ್ತುಕೊಂಡು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.










