ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಅವರು ಇದೇ ಮೊದಲ ಬಾರಿಗೆ ಮುದ್ದು ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಆದರೆ, ಈವರೆಗೆ ಮಗಳ ಫೋಟೋವನ್ನು ಬಹಿರಂಗಪಡಿಸಿರಲಿಲ್ಲ. ಈಗ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ಅಮೆರಿಕದ ಲಾಸ್ ಎಂಜಲೀಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಭಾಗಿ ಆಗಿದ್ದರು. ಈ ವೇಳೆ ಅವರ ಮಗಳ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಮಾಲ್ತಿ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವಳು ಎಷ್ಟು ಕ್ಯೂಟ್ ಆಗಿದ್ದಾಳೆ ಎಂಬ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.










