ತಿರುವನಂತಪುರಂ : ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ (35) ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ನಟಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 2012ರಲ್ಲಿ ಅವರಿಗೆ ಬ್ರೇನ್ ಟ್ಯೂಮರ್ ಇದೆ ಎಂಬುದು ತಿಳಿದುಬಂದಿತ್ತು. 11ಕ್ಕೂ ಹೆಚ್ಚು ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಮೇ 23 ರಂದು ಶರಣ್ಯ ಅವರಿಗೆ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೆಂಟಿಲೇಟರ್ ಐಸಿಯುನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಜೂನ್ ನಲ್ಲಿ ಐಸಿಯುನಿಂದ ಹೊರಬಂದಿದ್ದರು. ಆದರೆ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಪುನಃ ದಾಖಲಾಗಿದ್ದರು. ಆದರೂ ಕ್ಯಾನ್ಸರ್ ಗೆಲ್ಲಲು ಶರಣ್ಯಾಗೆ ಸಾಧ್ಯವಾಗಿಲ್ಲ. ಅಂತಿಮವಾಗಿ ನಿನ್ನೆ ಕೊನೆಯುಸಿರೆಳೆದಿದ್ದಾರೆ.










