ಯಾದಗಿರಿ : ಕ್ರಿಮಿನಾಶಕವನ್ನು ಸೇವಿಸಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ. ಖೈರನ್(2) ಹಾಗೂ 4 ತಿಂಗಳ ಮಗು ಅಫ್ಸಾನಾ ಮೃತ ಮಕ್ಕಳು ಎಂದು ಗುರುತಿಸಲಾಗಿದ್ದು, ಮಕ್ಕಳು ಕ್ರಿಮಿನಾಶಕ ಸೇವಿಸಿದ್ದಕ್ಕೆ ಆತಂಕಗೊಂಡು ತಾಯಿ ಶಹನಹಾಜ್ ಅವರು ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹನಹಾಜ್ ಅವರು ಮನೆಯೊಳಗೆ ಕೆಲಸ ಮಾಡುತ್ತಿದ್ದ ವೇಳೆ ಖೈರನ್ ತನ್ನ ತಂಗಿ ಅಫ್ಸಾನಾಳನ್ನು ಆಟವಾಡಿಸುತ್ತಿದ್ದಳು. ಈ ವೇಳೆ ತಿಳಿಯದೇ ಮೊದಲು ಮಗುವಿಗೆ ಕ್ರಿಮಿನಾಶಕವನ್ನು ಕುಡಿಸಿ ಬಳಿಕ ತಾನೂ ಸೇವಿಸಿದ್ದಾಳೆ. ಬಳಿಕ ಮಕ್ಕಳು ಒದ್ದಾಡುತ್ತಿದ್ದನ್ನು ಕಂಡ ತಾಯಿ ಶಹನಹಾಜ್ ಅವರು ಆತಂಕಗೊಂಡು ಪತಿಯ ಮನೆಯವರು ನಿಂದಿಸುತ್ತಾರೆ ಎಂದು ತಾನೂ ಕ್ರಮಿನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಿದರೂ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಶಹನಹಾಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










