ಗರ್ಭಿಣಿ ಮೇಕೆ ಮೇಲೆ ವಿಕೃತಿ ಮೆರೆದ ಕಾಮುಕರು!

97
firstsuddi

ತಿರುವನಂತಪುರಂ : ಗರ್ಭಿಣಿ ಮೇಕೆ ಮೇಲೆ ವಿಕೃತಕಾಮಿಗಳು ಅತ್ಯಾಚಾರವೆಸಗಿ ಕೊಂದು ಹಾಕಿರುವ ಘಟನೆ ಕೇರಳದ ಕಾಞಂಗಾಡು ಪೇಟೆಯಲ್ಲಿ ನಡೆದಿದೆ. ಮೂವರು ವಿಕೃತಕಾಮಿಗಳು ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದಾರೆ.

ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ ಸೇರಿದ ಈ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿತ್ತು. ನಿನ್ನೆ ನಸುಕಿನ ಜಾವ 1.30ರ ಸುಮಾರಿಗೆ ಮೇಕೆ ಸದ್ದು ಕೇಳಿಬಂದಿದೆ. ಹೊಟೇಲ್ ನ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ನೋಡಿದ್ದಾರೆ. ಆಗ ಮೂವರು ಗೋಡೆ ಹಾರಿ ಪರಾರಿಯಾಗಿದ್ದಾರೆ. ಈ ವೇಳೆ ಒಬ್ಬ ಆರೋಪಿ ಸೆಂಥಿಲ್ ನನ್ನು ಹಿಡಿದಿದ್ದಾರೆ. ಮೇಕೆ ಸತ್ತಿರುವುದು ಅವರ ಗಮನಕ್ಕೆ ಬಂದಿದೆ. ಅಲ್ಲದೆ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೆಂಥಿಲ್ ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೋಟೆಲ್ ಉದ್ಯೋಗಿ ಸೆಂಥಿಲ್ ನನ್ನು ಬಂಧಿಸಿದ್ದೇವೆ. ಇತರ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಮೂಲದ ಸೆಂಥಿಲ್ ಮೂರೂವರೆ ತಿಂಗಳ ಹಿಂದೆ ಕೆಲಸ ಅರಸಿ ಬಂದಿದ್ದ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.