ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮಾಡಿದ ನಟ ಅಜಯ್ ರಾವ್.

100
firstsuddi

ವಿಜಯನಗರ : ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಮಾಡುವ ಮೂಲಕ ಸ್ಯಾಂಡಲ್ ವುಡ್ ನ ನಟ ಅಜಯ್ ರಾವ್ ಮಾನವೀಯತೆ ಮೆರೆದಿದ್ದಾರೆ.

ಕೂಡ್ಲಿಗಿಯ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ನಿನ್ನೆ ರಾತ್ರಿ ಮೈಸೂರಿನಿಂದ ಹೊಸಪೇಟೆಗೆ ಬರುರ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಕಾರ್ ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅದೇ ಮಾರ್ಗವಾಗಿ ಬೆಂಗಳೂರಿಗೆ ನಟ ಅಜಯ್ ರಾವ್ ಹೋಗುತ್ತಿದ್ದರು. ಈ ವೇಳೆ ಇದನ್ನು ಗಮನಿಸಿದ ಅಜಯ್ ರಾವ್ ತಮ್ಮ ಕಾರ್ ನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ತಂದು ಮೆಡಿಕಲ್ ವಸ್ತುಗಳನ್ನು ಬಳಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.