ಗುಡ್ ನ್ಯೂಸ್ ಕೊಟ್ಟ ವಿರುಷ್ಕಾ ದಂಪತಿ…

206
firstsuddi

ಮುಂಬೈ : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸುತ್ತಿದ್ದು, ವಿರಾಟ್ ಕೊಹ್ಲಿ ಅವರು ತಾವು ತಂದೆಯಾಗುತ್ತಿರುವ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಮೂರು ವರ್ಷದ ಬಳಿಕ ಅನುಷ್ಕಾ ಅವರು ಗರ್ಭಿಣಿಯಾಗಿದ್ದು, ಈ ಕುರಿತು ಕೊಹ್ಲಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ನಾವು ಈಗ ಮೂವರು, ಜನವರಿ 2021ಕ್ಕೆ ಆಗಮಿಸುತ್ತಿದ್ದಾರೆ ಎಂದು ತಾವು ತಂದೆಯಾಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ.

View this post on Instagram

And then, we were three! Arriving Jan 2021 ❤️🙏

A post shared by Virat Kohli (@virat.kohli) on