ಗೋವಾದಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ!

71
firstsuddi

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ,ಬಾಲಿವುಡ್ ನಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ರಶ್ಮಿಕಾ ಗೋವಾದಲ್ಲಿ ಹೊಸ ಮನೆಯನ್ನು ಖರೀದಿಸಿದ್ದು, ಅದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಫೋಟೋದಲ್ಲಿ ಈಜುಕೊಳ ಪಕ್ಕದಲ್ಲೇ ಬುದ್ಧನ ಮೂರ್ತಿ ಹಾಗೂ ಬೃಹತ್ ಮರ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ಫೋಟೋ ಜೊತೆಗೆ ರಶ್ಮಿಕಾ ಮಂದಣ್ಣ ನೀಡಿದ ಕ್ಯಾಪ್ಷನ್ ಕೂಡ ಗಮನ ಸೆಳೆಯುತ್ತಿದೆ. ಗೋವಾದಲ್ಲಿ ನಿಮ್ಮ ಹೊಸ ಮನೆ ಖರೀದಿಸಿದಾಗ.. ಹೊಟ್ಟೆ ಕಿಚ್ಚಾಯ್ತಾ? ಎಂದು ಪ್ರಶ್ನಿಸಿದ್ದಾರೆ.

ಸದ್ಯ ರಶ್ಮಿಕಾ ಗೋವಾದಲ್ಲಿ ಮನೆ ಖರೀದಿಸಿದ್ದು, ಹೀಗೆ ಮೇಲಿಂದ ಮೇಲೆ ಮನೆ ಖರೀದಿಸುತ್ತಿರುವ ರಶ್ಮಿಕಾಗೆ ಹಣ ಎಲ್ಲಿಂದ ಬರುತ್ತಿದೆ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಫ್ಲಾಟ್‍ವೊಂದನ್ನು ಖರೀದಿಸಿದ್ದರು.