ಕೋಲಾರ : 5 ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ ಯತ್ನ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ವಿಚಾರ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಹಿರಿಯರೆಲ್ಲಾ ಸೇರಿ ಪಂಚಾಯತಿ ಮಾಡಿದ್ದು, ಮಗುವಿನ ಪೋಷಕರಿಗೆ ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹಾಕಿದ್ದಾರೆ. ಆದರೆ ಸಂಬಂದಿಕರ ಸಹಾಯ ಪಡೆದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, 5 ವರ್ಷದ ಬಾಲಕಿಗೆ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆರೋಪಿ ಇಲಿ ಪಾಷಣ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿಯನ್ನ ಬಂಧಿಸಿದ ಪೊಲೀಸರು ವ್ಯಕ್ತಿಯನ್ನ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.










