ಚಿಕ್ಕಮಗಳೂರು : ಕಾರಿನ ಮೇಲೆ ಒಂಟಿ ಸಲಗ ದಾಳಿ-ಇಬ್ಬರ ಸ್ಥಿತಿ ಗಂಭೀರ…

233
firstsuddi

ಚಿಕ್ಕಮಗಳೂರು : ಕಾರಿನ ಮೇಲೆ ಒಂಟಿ ಸಲಗ ದಾಳಿ ನಡೆಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಬಿಳವೇನಹಳ್ಳಿಯಲ್ಲಿ ನಡೆದಿದೆ. ಭರತ್, ಶರತ್ ಹಾಗೂ ಮಧು ಎಂಬುವವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಎದುರಿಗೆ ಬಂದ ಒಂಟಿ ಸಲಗ ಕಾರಿನ ಮೇಲೆ ದಾಳಿ ನಡೆಸಿದ್ದು, ಪರಿಣಾಮ ವಾಹನದಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆನೆ ದಾಳಿಯಿಂದಾಗಿ ಕಾರು ಸಂಪೂರ್ಣ ಜಖಂ ಆಗಿದೆ.