ಚಿಕ್ಕಮಗಳೂರು : ಜನತಾ ಕರ್ಫ್ಯೂನಿಂದ ಆಹಾರವಿಲ್ಲದೆ ಕಂಗಾಲಾಗಿದ್ದ ನಿರ್ಗತಿಕರಿಗೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸಹಾಯ ಹಸ್ತ

298
firstsuddi

ಚಿಕ್ಕಮಗಳೂರು : ಜನತಾ ಕರ್ಫ್ಯೂನಿಂದಾಗಿ ಅಂಗಡಿ, ಹೊಟೇಲ್‍ಗಳು ಮುಚ್ಚಿದ ಪರಿಣಾಮ ಆಹಾರ ಕಾಣದೆ ಕಂಗಾಲಾಗಿದ್ದ ನಗರದ ಬಿಕ್ಷುಕರು ಮತ್ತು ನಿರ್ಗತಿಕರಿಗೆ ಇಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದರು.

ತಮ್ಮ ಜೇಬಿನಿಂದಲೇ ಹಣ ವಿತರಿಸಿದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅವರ ಮನೆಯಲ್ಲಿ 50 ಕಿಲೋ ಅಕ್ಕಿಯಿಂದ ಚಿತ್ರಾನ್ನ ತಯಾರಿಸಿದರು. ಬಳಿಕ ಕಾರ್ಯಕರ್ತರೊಂದಿಗೆ ಬಾಳೆ ಹಣ್ಣು, ಬಿಸ್ಕತ್ತು ಮತ್ತು ನೀರಿನ ಬಾಟಲಿಗಳನ್ನು ಆಪೆ ವಾಹನದಲ್ಲಿ ತೆಗೆದುಕೊಂಡು ಹೊರಟರು. ನಗರದ ಆಸ್ಪತ್ರೆ, ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ ಸಂತೆ ಮೈದಾನ ಉಪ್ಪಳ್ಳಿ ಶೃಂಗಾರ್ ವೃತ್ತ, ಕೋಟೆ, ಬೇಲೂರು ರಸ್ತೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಂಚರಿಸಿ ಬಿಕ್ಷುಕರು ಮತ್ತು ನಿರ್ಗತಿಕರನ್ನು ಹುಡುಕಿ ಅವರಿಗೆ ಆಹಾರ, ನೀರು ವಿತರಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ತನೋಜ್, ರಸೂಲ್‍ಖಾನ್, ಎಚ್.ಎಂ.ರತನ್, ರಾಜೇಶ್, ಪವನ್ ಮತ್ತಿತರರು ಉಪಸ್ಥಿತರಿದ್ದರು.