ಚಿಕ್ಕಮಗಳೂರು : ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ…

602
firstsuddi

ಚಿಕ್ಕಮಗಳೂರು : ಪೊಲೀಸರನ್ನು ತಳ್ಳಿ ಓಡಿ ಹೋಗಿ ಕೆರೆಗೆ ಹಾರಿದ ಆರೋಪಿಯನ್ನು ರಕ್ಷಿಸಲು ಪೇದೆಯು ಅವನ ಹಿಂದೆ ಓಡಿ ಹೋಗಿ ಕೆರೆಗೆ ಹಾರಿರುವ ಘಟನೆ ಎನ್.ಆರ್. ಪುರ ತಾಲ್ಲೂಕಿನ ಹಳೇ ಮಂಡಗದ್ದೆ ಗ್ರಾಮದಲ್ಲಿ ನಡೆದಿದೆ. ಚಿದಂಬರ ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಎನ್ನಲಾಗಿದ್ದು, 2017ರಲ್ಲಿ ಫೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಚಿದಂಬರ ಜೈಲುವಾಸ ಅನುಭವಿಸಿ ಬಂದಿದ್ದ. ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್ ಬಂದರೂ ಗೈರಾಗುತ್ತಿದ್ದ. ಇದರಿಂದ ಎನ್.ಆರ್. ಪುರ ಪೊಲೀಸರು ಅವನನ್ನು ಬಂಧಿಸಿ ಕರೆತರುವಾಗ ಪೊಲೀಸರನ್ನು ತಳ್ಳಿ ಓಡಿ ಹೋಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವನ ಹಿಂದೆ ಪೇದೆ ಸುರೇಶ್ ಓಡಿ ಹೋಗಿ ಚಿದಂಬರನನ್ನು ರಕ್ಷಿಸಿದ್ದಾರೆ. ಕೂಡಲೇ ಅವನನ್ನು ಎನ್.ಆರ್. ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.