ಚಿಕ್ಕಮಗಳೂರು : ಮಕ್ಕಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ಡಾ|| ಅನಿಕೇತ್.

82
firstsuddi

ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೃದಯ ತಜ್ಞ ಡಾ|| ಅನಿಕೇತ್ ಸಲಹೆ ಮಾಡಿದರು.

ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಸರ್ವಾಂಗೀಣ ಅಭಿವೃದ್ದಿ ಹೊಂದಿ ಮುಂದುವರೆಯಬೇಕಾದರೆ ರಾಷ್ಟ್ರದ ಜನತೆ ವೈಜ್ಞಾನಿಕವಾಗಿ ಬೆಳೆಯಬೇಕು, ವೈಜ್ಞಾನಿಕ ಚಿಂತನೆ ಮತ್ತು ಮನೋಭಾವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್ ಸಿ.ವಿ.ರಾಮನ್ ಅವರ ಬದುಕು, ಬರಹ ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಸಿ.ವಿ.ರಾಮನ್ ಅವರ ಆದರ್ಶಗಳನ್ನು ಮತ್ತು ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ವಿಜ್ಞಾನಿಗಳಾಗಬಹುದು ಎಂದು ತಿಳಿಸಿದರು. ಕುವೆಂಪು ವಿದ್ಯಾನಿಕೇತನದ ಟ್ರಸ್ಟಿ ಅರ್ಚನಾ ಶಂಕರ್, ಪ್ರಾಂಶುಪಾಲ ರಾಘವೇಂದ್ರ ಉಪಸ್ಥಿತರಿದ್ದರು.