ಚಿಕ್ಕಮಗಳೂರು : ಮದ್ಯದ ಅಮಲಿನಲ್ಲಿ ಅಣ್ಣನನ್ನೇ ಕೊಲೆಗೈದ ತಮ್ಮ…

403
firstsuddi

ಚಿಕ್ಕಮಗಳೂರು : ಮದ್ಯದ ಅಮಲಿನಲ್ಲಿ ತಮ್ಮ ತನ್ನ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಉಪ್ಪಾರ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅರುಣ್(30) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಕಿರಣ್ ಅಣ್ಣನನ್ನೇ ಕೊಲೆಗೈದ ತಮ್ಮ. ಅರುಣ್ ಹಾಗೂ ಕಿರಣ್ ಇಬ್ಬರು ಮನೆಮುಂದೆ ಚೌಕಬಾರ ಆಟವಾಡುತ್ತಿದ್ದ ವೇಳೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಈ ವೇಳೆ ಕಿರಣ್ ತನಗೆ ನೀಡಬೇಕಾದ 500 ರೂ ಹಣವನ್ನು ವಾಪಾಸ್ ನೀಡುವಂತೆ ಅರುಣ್ ಅವರಲ್ಲಿ ಒತ್ತಾಯ ಮಾಡಿದ್ದಾರೆ. ಆದರೆ ಅರುಣ್ ಹಣ ನೀಡದೆ ಇದ್ದುದರಿಂದ ಕಿರಣ್ ಮದ್ಯದ ಅಮಲಿನಲ್ಲಿ ಅಣ್ಣನಿಗೆ ಥಳಿಸಿದ್ದು, ಈ ವೇಳೆ ಅರುಣ್ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅರುಣ್ ಮೃತಪಟ್ಟಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಲಕ್ಕವಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಕಿರಣ್‍ನನ್ನು ಬಂಧಿಸಿದ್ದಾರೆ.