ಚಿಕ್ಕಮಗಳೂರು : ಲಾಕ್‍ಡೌನ್‍ನಿಂದ ಮುಚ್ಚಲಾಗಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಮರು ಆರಂಭಿಸುವಂತೆ ಬಿಎಸ್‍ಪಿ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಒತ್ತಾಯ…

163
firstsuddi

ಚಿಕ್ಕಮಗಳೂರು : ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ಮರು ಆರಂಭಿಸುವಂತೆ ಬಹುಜನ ಸಮಾಜಪಕ್ಷದ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಛೇರಿ ಸಹಾಯಕ ಮನು ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಸಾರ್ವಜನಿಕ ಗ್ರಂಥಾಲಯಗಳು ಮುಚ್ಚಿರುವುದರಿಂದಾಗಿ ಬಡ ವಿದ್ಯಾರ್ಥಿಗಳು ಉಪಯುಕ್ತ ಪುಸ್ತಕಗಳನ್ನು, ಅಧ್ಯಯನ ಗ್ರಂಥಗಳನ್ನು ಖರೀದಿಸಿ ಓದಲಾಗದೇ ಪರದಾಡುತ್ತಿದ್ದಾರೆ, ಗ್ರಂಥಾಲಯಗಳನ್ನು ಮರು ಆರಂಭಿಸಿದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯಗಳು ಮುಚ್ಚಿರುವುದರಿಂದಾಗಿ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೆಟ್ಟು ಬಿದ್ದಿದೆ, ಸಾರ್ವಜನಿಕರೂ ಸಹ ದಿನಪತ್ರಿಕೆ, ವಾರಪತ್ರಿಕೆ ಸೇರಿದಂತೆ ಪುಸ್ತಕಗಳನ್ನು ಓದಲಾಗದೇ ಪರದಾಡುತ್ತಿದ್ದಾರೆ ಎಂದರು.
ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ತೆರೆಯಲು ಅನುಮತಿ ನೀಡಿರುವಂತೆ ಲೈಬ್ರರಿಗಳನ್ನು ಆರಂಭಿಸಲೂ ಅವಕಾಶ ನೀಡಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಅಧ್ಯಯನ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಹುಜನ ಸಮಾಜಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಸಹೋದರತ್ವ ಸಮಿತಿಯ ಸಂಚಾಲಕ ವಾಹೀದ್ ಜಾನ್, ತಾಲ್ಲೂಕು ಅಧ್ಯಕ್ಷ ಹರೀಶ್, ಹನುಮಂತರಾಯ, ಸುರೇಶ್, ಜೋಸೆಫ್ ಹಾಜರಿದ್ದರು.