ಚಿತ್ರದುರ್ಗ : ಹೃದಯಾಘಾತದಿಂದ ಡಿವೈಎಸ್​ಪಿ ನಿಧನ…

61
firstsuddi

ಚಿತ್ರದುರ್ಗ : ಡಿಸಿಆರ್ ಬಿ ಡಿವೈಎಸ್​ಪಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ರಮೇಶ್(52) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪ್ರತಿದಿನದಂತೆ ಇಂದು ಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದ ರಮೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದರು. ಆಗ ತಕ್ಷಣ ಪೊಲೀಸರು ರಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ರಮೇಶ್ ಕೊನೆಯುಸಿರೆಳೆದಿದ್ದಾರೆ.

1998 ಬ್ಯಾಚ್ ನಲ್ಲಿ ರಮೇಶ್ ಅವರು ಪೊಲೀಸ್ ಸೇವೆಗೆ ಸೇರಿದ್ದರು. ಈ ವಿಚಾರ ತಿಳಿದ ಚಿತ್ರದುರ್ಗ ಎಸ್​ಪಿ ಜಿ.ರಾಧಿಕಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.