ಜನಸಾಮಾನ್ಯರಿಗೆ ಬಿಗ್ ಶಾಕ್! ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ.

22

ರಾಮನಗರ: ಮಾಗಡಿ ತಾಲೂಕಿನ ಹೊಸಪೇಟೆಯಲ್ಲಿ ನೂತನ ಬಮೂಲ್ ಕಚೇರಿ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀವು ನಮಗೆ ಸಹಕಾರ ನೀಡಿದರೆ ಹಾಲಿನ ದರವನ್ನು ಹೆಚ್ಚಳ ಮಾಡ್ತೀವಿ. ಆ ಹಣವನ್ನು ರೈತರಿಗೆ ಕೊಡ್ತೀವಿ ಎಂದು ಪರೋಕ್ಷವಾಗಿ ಹಾಲಿನ ದರ ಏರಿಕೆ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಸುಳ್ಳು ಹೇಳುವವರಿಗೆ ಚಪ್ಪಾಳೆ ತಟ್ಟಬೇಡಿ. ಬಿಜೆಪಿ ಪಕ್ಷದವರು ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಸುಳ್ಳು ಹೇಳಿದವರಿಗೂ ನೀವು ಚಪ್ಪಾಳೆ ತಟ್ಟುತ್ತೀರಿ, ದಯಮಾಡಿ ಆ ಕೆಲಸ ಮಾಡಬೇಡಿ. ನಾವು ಜನರ ಒಳಿತಿಗೆ ಕೆಲಸ ಮಾಡ್ತಿದ್ದೀವಿ, ಶಕ್ತಿ ಯೋಜನೆ ಆರಂಭವಾದಗಿನಿಂದ 297 ಕೋಟಿ ಜನ ಪ್ರಯಾಣ ಮಾಡಿದ್ದಾರೆ, ಉಚಿತ ಅಕ್ಕಿ ವಿತರಣೆ ಮಾಡ್ತಿದ್ದೀವಿ. ಉಚಿತ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡ್ತಿದ್ದೇವೆ. ಅಂಬೇಡ್ಕರ್ ಆಶಯದಂತೆ ಕೆಲಸ ಮಾಡ್ತಿದ್ದೇವೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಪ್ರಸ್ತಾಪ ಮಾಡಿದ ಸಿಎಂ. ಸಭೆ ನಡೆಸಿ ಹಾಲಿನ ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡ್ತೀವಿ. ನೀವೆಲ್ಲರೂ ನಮ್ಮ ಪರವಾಗಿರಿ. ಬಮೂಲ್ ಎಂಡಿ ಜೊತೆಗೆ ಸಭೆ ಮಾಡ್ತೇನೆ ನಂತರ ಹಾಲಿನ ದರ ಹೆಚ್ಚಳ ಮಾಡ್ತೇನೆ. ಹಾಲಿನ ದರ ಎಷ್ಟು ಹೆಚ್ಚಳ ಮಾಡ್ತೀವೋ ಅಷ್ಟನ್ನೂ ರೈತರಿಗೆ ಕೊಡೋಣ ಎಂದು ಸಭಾ ಕಾರ್ಯಕ್ರಮದಲ್ಲಿ ಸಚಿವ ರಾಜಣ್ಣಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.