ಜೂನ್ 11ಕ್ಕೆ ಷಡಾದಾರ ಪ್ರತಿಷ್ಠಾ ಕಾರ್ಯಕ್ರಮ…

92
firstsuddi

ಚಿಕ್ಕಮಗಳೂರು: ನಗರ ಹೊರವಲಯ ಸಿರ್ಗಾಪುರದ ಶ್ರೀ ಗುರುದತ್ತ ಚೈತನ್ಯ ಶೋಡಶಿ ಸೇವಾ ಆಶ್ರಮದಲ್ಲಿ ಶ್ರೀ ಚಿಂತಾಮಣಿ ದುರ್ಗಾದೇವಿಯ ಮತ್ತು ಶಿಲಾ ದೇಗುಲದ ನಿರ್ಮಾಣದ ಅಂಗವಾಗಿ ಜೂನ್ 11ರಂದು ಷಡಾದಾರ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 10:30 ಕ್ಕೆ 32 ಹಸ್ತಗಳುಳ್ಳ ಹನ್ನೊಂದು ಅಡಿ ಎತ್ತರದ ಶ್ರೀ ದುರ್ಗಾದೇವಿ ವಿಗ್ರಹದ ನಿರ್ಮಾಣದ ಕಾರ್ಯವನ್ನು ತಂತ್ರಿಗಳಿಗೆ ಹಸ್ತಾಂತರಿಸಲಾಗುವುದು. ಕೋಟಿ ಅರ್ಚನೆಗೊಂಡ ಶ್ರೀ ಚಕ್ರಯಂತ್ರವನ್ನು ಭೂಗರ್ಭದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಆಶ್ರಮದ ಅಧ್ಯಕ್ಷ ಅಶೋಕ್ ಶರ್ಮಾ ತಿಳಿಸಿದ್ದಾರೆ.

ಈ ವೇಳೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.