ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲು…

75
firstsuddi

ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಜೇಮ್ಸ್ ಸಿನಿಮಾ ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ ನ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರಿಗೆ ಹೈ ಬಿಪಿಯಿಂದ ಸ್ಟ್ರೋಕ್ ಆಗಿದೆ ಎನ್ನಲಾಗುತ್ತಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪುನೀತ್ ರಾಜ್ ಕುಮಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ಕಿಶೋರ್ ಪತ್ತಿಕೊಂಡ, ಮೊದಲ ಸಿನಿಮಾದಲ್ಲೇ ಗೆಲುವು ಕಂಡವರು. ಜೇಮ್ಸ್ ಚಿತ್ರದ ಗೆಲುವಿನ ನಂತರ ಕಿಶೋರ್ ಪತ್ತಿಕೊಂಡ ಹೊಸ ಚಿತ್ರವನ್ನು ಸಹ ಮಾಡುತ್ತಿದ್ದರು.