ಡಿಕೆಶಿ ಪುತ್ರಿ ಐಶ್ವರ್ಯಾ ಹಾಗೂ ಸಿದ್ದಾರ್ಥ್ ಅವರ ಪುತ್ರ ಅಮರ್ಥ್ಯ ಹೆಗ್ಡೆ ನಿಶ್ಚಿತಾರ್ಥ…

194

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹಾಗೂ ಕಾಫಿ ಡೇ ಮಾಲೀಕ ದಿ|| ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ ಅಮರ್ಥ್ಯ ಹೆಗ್ಡೆ ಅವರ ನಿಶ್ಚಿತಾರ್ಥ ಸಮಾರಂಭ ಇಂದು ಬೆಂಗಳುರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ತಾಜ್ ಹೋಟೇಲ್ ನಲ್ಲಿ ನೆರವೇರಿತು. ಕೋವಿಡ್ ಭೀತಿ ಇರುವ ಹಿನ್ನೆಲೆ, ನಿಶ್ಚಿತಾರ್ಥ ಸಮಾರಂಭಕ್ಕೆ ಕೆಲವು ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದ್ದು,

ಈ ಸಮಾರಂಭದಲ್ಲಿ ಎರಡೂ ಕುಟುಂಬದ ನಿಕಟ ಸಂಬಂಧಿಕರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ.ಕೆ ಸುಧಾಕರ್, ಆರ್. ಅಶೋಕ್ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದು, ಅವಧೂತ ವಿನಯ್ ಗುರೂಜಿ ಅವರು ಕೂಡಾ ಈ ಸಮಾರಂಭಕ್ಕೆ ಆಗಮಿಸಿದ್ದರು.