ಡೆತ್‍ನೋಟ್ ಬರೆದಿಟ್ಟು ಬಸ್ ಕಂಡಕ್ಟರ್ ಆತ್ಮಹತ್ಯೆ…

229
firstsuddi

ಬೆಳಗಾವಿ : ಮೇಲಾಧಿಕಾರಿಯ ಕಿರುಕುಳದಿಂದ ಬೇಸತ್ತು ಡೆತ್ ನೋಟ್ ಬರೆದು ಬಸ್ ಕಂಡಕ್ಟರ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ 2ನೇ ಬಸ್ ಡಿಪೋದಲ್ಲಿ ನಡೆದಿದೆ. ಆನಂದ್ ಕೋಲ್ಕಾರ್(55) ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್ ಎನ್ನಲಾಗಿದ್ದು, ಮತ್ತಿತರ ಸಿಬ್ಬಂದಿಗಳಿಗೆ ಆಗುತ್ತಿರುವ ಕಿರುಕುಳವನ್ನು ತಡೆಯಬೇಕೆಂದು ಡೆತ್ ನೋಟ್‍ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಕರ್ತವ್ಯವನ್ನು ನಿಯೋಜಿಸುವ ಅಧಿಕಾರಿ ಮುಲ್ಲಾ ಎಂಬುವವರನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಸ್ ಚಾಲಕರು ಹಾಗೂ ನಿರ್ವಾಹಕರು ಆಗ್ರಹಿಸಿದ್ದಾರೆ.