ತಮಿಳು ಕಿರುತೆರೆ ನಟಿ, ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣು…

301
firstsuddi

ಚೆನ್ನೈ : ತಮಿಳಿನ ಕಿರುತೆರೆ ನಟಿ ವಿಜೆ ಚಿತ್ರಾ(28) ಆತ್ಮಹತ್ಯೆಗೆ ಶರಣಾಗಿದ್ದು, ತಮಿಳು ಚಿತ್ರರಂಗದಲ್ಲಿ ನೀರವ ಮೌನ ಆವರಿಸಿದೆ. ನಟಿ ಚಿತ್ರಾ ಅವರು ತಮಿಳಿನ ಜನಪ್ರಿಯ ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸುತ್ತಿದ್ದರು. ಚಿತ್ರಾ ಅವರು ಇಂದು ಮುಂಜಾನೆ 2:30ರ ಸುಮಾರಿಗೆ ಚಿತ್ರೀಕರಣ ಮುಗಿಸಿಕೊಂಡು ತಾವು ತಂಗಿದ್ದ ಪಂಚತಾರಾ ಹೋಟೆಲ್ ಗೆ ತೆರಳಿದ್ದಾರೆ. ಬಳಿಕ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿತ್ರಾ ಅವರು ಕೆಲವು ತಿಂಗಳ ಹಿಂದೆ ಉದ್ಯಮಿ ಹೇಮಂತ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇಬ್ಬರು ಜೊತೆಯಲ್ಲೇ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಚಿತ್ರಾ ಅವರು ಪಾಂಡಿಯನ್ ಸ್ಟೋರ್ಸ್ ಧಾರವಾಹಿಯಲ್ಲಿ ಮುಲ್ಲೈ ಪಾತ್ರದ ಮೂಲಕ ಜನಪ್ರಿಯರಾಗಿದ್ದರು.