ಬೆಂಗಳೂರು : ಇಂದು ದಿವಂಗತ ಅನಂತ ಕುಮಾರ್ ಅವರ ಜನ್ಮ ದಿನವಾಗಿದ್ದು, ಈದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಆತ್ಮೀಯ ಸ್ನೇಹಿತನನ್ನು ಸ್ಮರಿಸಿಕೊಂಡಿದ್ದಾರೆ. ಇಂದು ನನ್ನ ಆತ್ಮೀಯ ಮಿತ್ರ,ದಶಕಗಳ ರಾಜಕೀಯ ಜೀವನದ ಒಡನಾಡಿ, ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ನೆನಪು, ಸಾಧನೆ, ಸಾರ್ಥಕತೆಗಳನ್ನು ಬಿಟ್ಟುಹೋಗಿರುವ ಹಿರಿಯ ನಾಯಕ ಶ್ರೀ ಅನಂತಕುಮಾರ್ ಅವರ ಜನ್ಮದಿನ. ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸದಾ ಸ್ಫೂರ್ತಿಯಾಗಿರುವ ಅನಂತಕುಮಾರ್,ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ನೀಡಿದ ಕೊಡುಗೆ ಅನನ್ಯ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇಂದು ನನ್ನ ಆತ್ಮೀಯ ಮಿತ್ರ,ದಶಕಗಳ ರಾಜಕೀಯ ಜೀವನದ ಒಡನಾಡಿ, ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ನೆನಪು, ಸಾಧನೆ, ಸಾರ್ಥಕತೆಗಳನ್ನು ಬಿಟ್ಟುಹೋಗಿರುವ ಹಿರಿಯ ನಾಯಕ ಶ್ರೀ ಅನಂತಕುಮಾರ್ ಅವರ ಜನ್ಮದಿನ. ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸದಾ ಸ್ಫೂರ್ತಿಯಾಗಿರುವ ಅನಂತಕುಮಾರ್,ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ನೀಡಿದ ಕೊಡುಗೆ ಅನನ್ಯ. pic.twitter.com/F4wnz1Aybd
— B.S. Yediyurappa (@BSYBJP) July 22, 2020










