ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು…

61
firstsuddi

ಹಿರಿಯ ಬುಹುಭಾಷಾ ನಟಿ ಖುಷ್ಬೂ ಸುಂದರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಅವರು ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಹೇಳಿದಂತೆ, ಜ್ವರ ಕೆಟ್ಟದಾಗಿದೆ. ಪರಿಣಾಮ ತುಂಬಾನೇ ಗಂಭೀರವಾಗಿದೆ. ತೀವ್ರ ಜ್ವರ ಹಾಗೂ ಸಾಯಿಸುವಂತಹ ದೇಹದ ನೋವಿನಿಂದ ನಾನು ಆಸ್ಪತ್ರೆ ಸೇರಿದ್ದೇನೆ. ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ. ಅನಾರೋಗ್ಯದ ಚಿಹ್ನೆ ಕಾಣಿಸಿದಾಗ ಅದನ್ನು ನಿರ್ಲಕ್ಷಿಸಬೇಡಿ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ಇನ್ನೂ ಬಹಳ ಸಮಯ ಬೇಕಿದೆ’ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ಅಭಿಮಾನಿಗಳು ಖುಷ್ಬೂ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.