ನಟಿ ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ-ದಾಳಿ ವೇಳೆ ಸಿಕ್ಕ ಹಣ ಎಷ್ಟು ಗೊತ್ತಾ…?

1200
firstsuddi

ಮಡಿಕೇರಿ : ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಐಟಿ ಅಧಿಕಾರಿಗಳು ನಿವಾಸದಲ್ಲಿದ್ದ 25 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ 7:30ಕ್ಕೆ ರಶ್ಮಿಕಾ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಮನೆಯನ್ನು ತಪಾಸಣೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ಗುರುವಾರ ಮಧ್ಯಾಹ್ನ ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್‍ನಲ್ಲಿ ಶೂಟಿಂಗ್‍ನಲ್ಲಿದ್ದ ರಶ್ಮಿಕಾ ಅವರು ಕೂಡಲೇ ಅಲ್ಲಿಂದ ಹೊರಟು ಗುರುವಾರ ರಾತ್ರಿ ತಮ್ಮ ಮನೆಗೆ ಧಾವಿಸಿದ್ದರು. ಐಟಿ ಅಧಿಕಾರಿಗಳು ಸತತ 29 ಗಂಟೆಗಳ ಕಾಲ ರಶ್ಮಿಕಾ ಮಂದಣ್ಣ ಅವರನ್ನು ವಿಚಾರಣೆ ನಡೆಸಿ ಬಳಿಕ 1ಸೂಟ್‍ಕೇಸ್, 3ಹ್ಯಾಂಡ್ ಬ್ಯಾಗ್ ಹಾಗೂ 1ಬ್ಯಾಗ್ ನಲ್ಲಿ ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದು, ರಶ್ಮಿಕಾ ಅವರ ತಂದೆ ಒಡೆತನದ ಕಲ್ಯಾಣ ಮಂಟಪದ ವ್ಯವಹಾರದ ಬಗ್ಗೆ ಕೆಲವು ಮಾಹಿತಿಯನ್ನು ಮುಚ್ಚಿಟ್ಟಿರುವ ಆರೋಪ ಕೇಳಿ ಬರುತ್ತಿವೆ. ಅಲ್ಲದೇ ದಾಳಿ ವೇಳೆ ರಶ್ಮಿಕಾ ಅವರ ನಿವಾಸದಲ್ಲಿ ದಾಖಲೆಯಿಲ್ಲದ 3.94 ಕೋಟಿ ರೂ ಮೊತ್ತದ ಆದಾಯ ಪತ್ತೆಯಾಗಿದ್ದು, 1.5 ಕೋಟಿ ರೂಗಳಿಗೆ ಆದಾಯ ಕಟ್ಟಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.