ಮೈಸೂರು : ಹೋಟೆಲ್ ನ ದಲಿತ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪಿಸಿದ್ದರು, ಈ ಹಿನ್ನಲೆ ಪೊಲೀಸ್ ಅಧಿಕಾರಿಗಳು ಇಂದು ಹೋಟೆಲ್ ಗೆ ಭೇಟಿ ನೀಡಿ, ಮಾಲೀಕ ಸಂದೇಶ್ ಹಾಗೂ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಪ್ಲೈಯರ್ ಗಂಗಾಧರ್ ಅವರಿಂದ ಮಾಹಿತಿ ಸಂಗ್ರಹಿಸಿದರು.
ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಗಂಗಾಧರ್ ಅವರು, ನನ್ನ ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಸರ್ವಿಸ್ ನಲ್ಲಿ ತಡ ಆಗಿದ್ದಕ್ಕೆ ಬೈದರು ಅಷ್ಟೇ. ಮೊದಲಾಗಿ ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ಕಣ್ಣುಗಳು ಕೂಡಾ ಸರಿಯಾಗಿ ಇವೇ, ಯಾವುದೇ ಗಾಯವಾಗಿಲ್ಲ. ಇಂದ್ರಜಿತ್ ಲಂಕೇಶ್ ದಲಿತಾ ಅಂತಾ ಸುಳ್ಳು ಆರೋಪ ಮಾಡಿದ್ದಾರೆ. ಘಟನೆ ನಡೆದ ಬಳಿಕ ಪೊರಕೆ ತಂದವರು ಯಾರೆಂಬುದು ಗೊತ್ತಿಲ್ಲ ಎಂದು ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.










