ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಸ್ಟೇಟಸ್ ಹಾಕಿ ಪ.ಪಂ ಸದಸ್ಯೆ ಆತ್ಮಹತ್ಯೆಗೆ ಯತ್ನ!

81
firstsuddi

ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ಪಟ್ಟಣ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಿದ್ದಕ್ಕೆ ಮನನೊಂದ ಜುಬೇದಾ ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್ ಹಾಕಿ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.

ಮಾತುಕತೆಯಂತೆ ಪ್ರಸ್ತುತ ಅಧ್ಯಕ್ಷೆ ಸುರಯ್ಯಾ ಭಾನು ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಸುರಯ್ಯಭಾನು ನಾನು ಆಶ್ರಯ ಸಮಿತಿ ಸಭೆ ಹಾಗೂ ಬಜೆಟ್ ಸಭೆ ನಡೆಸಿಯೇ ರಾಜೀನಾಮೆ ನೀಡುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಅಧ್ಯಕ್ಷ ಸ್ಥಾನ ನೀಡಲು ವಿಳಂಬವಾಗಿದ್ದರಿಂದ ಮನನೊಂದ ಜುಬೇದ ಆತ್ಮಹತ್ಯೆಗೆ ಯತ್ನಿಸಿಸಿದ್ದು, ಕೂಡಲೇ ಎನ್.ಆರ್.ಪುರ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.