ನಾನು ಯಾವ ತಪ್ಪು ಮಾಡಿಲ್ಲ, ಇನ್ನು 10 ಸಿಡಿ ರಿಲೀಸ್ ಮಾಡಲಿ ನಾನು ಹೆದರೋದಿಲ್ಲ : ರಮೇಶ್ ಜಾರಕಿಹೊಳಿ

211
firstsuddi

ಬೆಂಗಳೂರು : ನಾನು ಯಾವ ತಪ್ಪು ಮಾಡಿಲ್ಲ. ಇನ್ನು 10 ಸಿಡಿ ರಿಲೀಸ್ ಮಾಡಲಿ ನಾನು ಹೆದರೋದಿಲ್ಲ ಎಂದು ಜಾರಕಿಹೊಳಿ ಗುಡುಗಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಷಡ್ಯಂತ್ರವಾಗಿದೆ, ನಾನು ದೂರು ನೀಡಿ ಅರ್ಧ ಗಂಟೆ ಆದ ನಂತರ ಈ ವೀಡಿಯೋ ಬಂದಿರೋದು ಎಲ್ಲರಿಗೂ ಗೊತ್ತು. ಇಂತಹ 10 ವೀಡಿಯೋಗಳು ಬಂದ್ರೂ ನನ್ನಲ್ಲಿ ಎದುರಿಸುವ ಶಕ್ತಿ ಇದೆ. ನಾನು ಎಲ್ಲವನ್ನು ಎದುರಿಸಿ ನಿರ್ದೋಷಿ ಆಗಿ ಬರುತ್ತೇನೆ ,ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸದೇ ನಾನು ಬಿಡಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಆ ಯುವತಿ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂಬುದರ ಬಗ್ಗೆ ಗೊತ್ತಗಲಿ. ನಾವು ಅಪಾರ ಪ್ರಮಾಣದ ಎವಿಡೆನ್ಸ್ ಕಲೆ ಹಾಕಿದ್ದೇವೆ. ಆ ಯುವತಿ ಎಷ್ಟು ಒತ್ತಡದಲ್ಲಿದ್ದಾಳೆ ಎನ್ನುವುದು ಈ ವೀಡಿಯೋದಲ್ಲಿ ಕಾಣುತ್ತಿದೆ. ನನ್ನ ಜೇಬಿನಲ್ಲಿ ದಾಖಲೆಗಳು ಇವೆ. ಅದನ್ನ ರಿಲೀಸ್ ಮಾಡಿದರೆ ನಿಮಗೂ ಶಾಕ್ ಆಗುತ್ತೆ. ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದರು.

ಇನ್ನೂ ಸದನದಲ್ಲಿ ಸಿಡಿ ವಿಷಯ ಪ್ರಸ್ತಾಪ ಕುರಿತು ಪ್ರತಿಕ್ರಿಯೆ ನೀಡಿರುವ ಜಾರಕಿಹೊಳಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನ ಮೇಲೆ ರೇಪ್ ಕೇಸ್ ಹಾಕಿ ಅಂತ ಹೇಳಿದ್ದಾರೆ. ಅವರು ಯಾಕೆ ಹಾಗೆ ಹೇಳಿದರು ಅಂತ ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.