ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಯಾವುದೇ ಸಹಿ ಸಂಗ್ರಹ ಆಗಿಲ್ಲ : ಅರವಿಂದ ಬೆಲ್ಲದ.

93
firstsuddi

ಧಾರವಾಡ : ಸಿಎಂ ರೇಸ್ ನಲ್ಲಿ ಅರವಿಂದ್ ಬೆಲ್ಲದ ಇದ್ದಾರೆ, ಸಹಿ ಸಂಗ್ರಹ ಮಾಡಿದ್ದಾರೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಅರವಿಂದ ಬೆಲ್ಲದ ಅವರು, ರೇಣುಕಾಚಾರ್ಯ ಅವರ ಹೇಳಿಕೆಯ ಬಗ್ಗೆ ನಾನು ಏನೂ ಹೇಳಲಾರೆ. ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಯಾವುದೇ ಸಹಿ ಸಂಗ್ರಹ ಆಗಿಯೇ ಇಲ್ಲ. ಯಾವುದೇ ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ. ಒಂದೇ ಸಹಿ ಸಂಗ್ರಹ ನಡೆದಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಅದೊಂದೆ ಸಹಿ ಸಂಗ್ರಹ ನಡೆದಿದೆ. ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕು ನಾನು ಮಾಡುತ್ತಿರುವೆ ಎಂದು ಉತ್ತರಿಸಿದರು.