ನಿಮ್ಮನ್ನು ಕಣ್ಣಾರೆ ನೋಡಿದ ಬಳಿಕ ನನ್ನ ಉಸಿರು ನಿಲ್ಲಲಿ-ಸುದೀಪ್ ಅಭಿಮಾನಿಯ ಹಠ…

330
firstsuddi

ಚಾಮರಾಜನಗರ : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ ಒಬ್ಬರು ಸುದೀಪ್ ಅವರನ್ನು ಒಂದು ಬಾರಿ ಕಣ್ಣಾರೆ ನೋಡಿದ ಬಳಿಕ ನನ್ನ ಕೊನೆಯ ಉಸಿರು ನಿಲ್ಲಲಿ ಎಂದು ಹಠ ಹಿಡಿದು ಕುಳಿತಿದ್ದಾರೆ. ಸಿದ್ದರಾಜು ಎಂಬ ಯುವಕ ಚಿಕ್ಕ ವಯಸ್ಸಿನಿಂದಲೂ ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಸಿದ್ದರಾಜು ಅವರು ಕಳೆದ ಒಂದು ವರ್ಷದಿಂದ ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ನಿಮ್ಮನ್ನು ಒಂದು ಬಾರಿ ಕಣ್ಣಾರೆ ನೋಡಿದ ಬಳಿಕ ನನ್ನ ಉಸಿರು ನಿಲ್ಲಲಿ ಎಂದು ಸುದೀಪ್ ಅವರಲ್ಲಿ ಮನವಿ ಮಾಡಿಕೊಂಡಿದ್ದು, ನಾನು ಕಳೆದ ಒಂದು ವರ್ಷದಿಂದ ಸರ್ವಿಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಚಿಕ್ಕ ವಯಸ್ಸಿನಿಂದಲೂ ಸುದೀಪ್ ಅವರ ಅಪ್ಪಟ ಅಭಿಮಾನಿ. ನಾನು ಅವರ ಯಾವುದೇ ಸಿನಿಮಾ ಬಿಡುಗಡೆಯಾದರೂ ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ. ನಾನು ಈಗಾ ತುಂಬಾ ಕಷ್ಟದಲ್ಲಿದ್ದೇನೆ. ನೀವು ಎಲ್ಲೇ ಇದ್ದರೂ ಬಂದು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿದ್ದರಾಜು ಅವರ ತಂದೆ ಹುಟ್ಟು ಕುರುಡರಾಗಿದ್ದು, ಮಗನ ಚಿಕಿತ್ಸೆಗಾಗಿ ಭಿಕ್ಷೆ ಬೇಡಿ ಹಣವನ್ನು ಹೊಂದಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಸಿದ್ದರಾಜು ಅವರು ಕಳೆದ ಒಂದು ವರ್ಷದಿಂದ ತಮ್ಮ ಕೈ-ಕಾಲಿನ ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲೇ ಇರುವಂತಾಗಿದ್ದು, ಮಗನನ್ನು ಉಳಿಸಿಕೊಳ್ಳಲು ವೃದ್ಧ ದಂಪತಿ ಪರದಾಡುವಂತಾಗಿದೆ.