ನಿರ್ಭಯಾ ಪ್ರಕರಣ-ಆರೋಪಿ ಪವನ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾ-ನಾಳೆ ಆರೋಪಿಗಳಿಗೆ ಗಲ್ಲು…

183
firstsuddi

ನವದೆಹಲಿ : 2012ರ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಪವನ್‍ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ನಾಳೆ ಆರೋಪಿಗಳಿಗೆ ಗಲ್ಲು ಜಾರಿಗಳಿಸಲಾಗುತ್ತದೆ. ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಪವನ್‍ಗುಪ್ತ ಆ ಘಟನೆ ವೇಳೆ ನಾನಿನ್ನೂ ಅಪ್ರಾಪ್ತನಾಗಿದ್ದೆ. ಹೀಗಾಗಿ ನನಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್‍ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ನಾಳೆ ಬೆಳಿಗ್ಗೆ 5:30ಕ್ಕೆ ಆರೋಪಿಗಳಾದ ಅಕ್ಷಯ್, ಪವನ್ ಗುಪ್ತ, ವಿನಯ್ ಶರ್ಮಾ ಹಾಗೂ ಮುಖೇಶ್ ಸಿಂಗ್ ಗೆ ಗಲ್ಲಿಗೇರಿಸಲಾಗುತ್ತದೆ.