ನೀರು ಇಲ್ಲದಿದ್ದರೆ, ಎಂಜಲು ಬಳಸಿ ಎಂದು ಮಹಿಳೆ ತಲೆಗೆ ಉಗಿದ ಕೇಶವಿನ್ಯಾಸಕಾರ!

59
firstsuddi

ಲಕ್ನೋ : ಕೇಶ ವಿನ್ಯಾಸಕಾರನೋರ್ವ ಮಹಿಳೆಯ ಹೇರ್ ಕಟ್ ಮಾಡುವಾಗ ತಲೆಕೂದಲಿಗೆ ಎಂಜಲು ಉಗಿದಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಉತ್ತರಪ್ರದೇಶದ ಮುಜಾಫರ್ ನಗರದ ಕಿಂಗ್ ವಿಲ್ಲಾ ಹೋಟೆಲ್ ನಲ್ಲಿ ಕೂದಲ ರಕ್ಷಣೆಯ ಕುರಿತು ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಈ ವೇಳೆ ಪೂಜಾ ಎನ್ನುವವರಿಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲು ಬಳಸಿ ಎಂದು ಹೇಳಿ ಉಗಿಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ಘಟನೆ ವಿವಾವದ ಸ್ವರೂಪ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೇಶ ವಿನ್ಯಾಸಕಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಮಹಿಳಾ ಆಯೋಗವೂ ಘಟನೆಯ ಬಗ್ಗೆ ಗಮನಹರಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೇ ಖ್ಯಾತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ವಿರುದ್ಧ ಪ್ರಕರಣ ದಾಖಲಾಗಿದೆ. ಮನ್ಸೂರ್ ಪುರ ಪೊಲೀಸ್ ಠಾಣೆಯಲ್ಲಿ ದೂರಿನ ಮೇರೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 355 (ದಾಳಿ) ಮತ್ತು 504 (ನೋವು ಉಂಟು ಮಾಡುವುದು) ಮತ್ತು ಸಾಂಕ್ರಾಮಿಕ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವರ್ತನೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದು, ಹಬೀಬ್ ಇನ್ ಸ್ಟಾಗ್ರಾಮ್ ನಲ್ಲಿ ಕ್ಷಮೆಯಾಚಿಸಿದ್ದಾರೆ ಈವೆಂಟ್ನಲ್ಲಿ ಮಾತನಾಡಿದ ಕೆಲವು ಮಾತುಗಳು ಜನರನ್ನು ನೋಯಿಸುವಂತಿದೆ. ಕೆಲವೊಮ್ಮೆ, ನೀವು ಹಾಸ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಿದ್ದರೂ, ನನ್ನ ಹೃದಯದಿಂದ ಹೇಳುತ್ತೇನೆ, ನಿಮಗೆ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹಬೀಬ್ ಕ್ಷಮೆಯಾಚಿಸಿದ್ದಾರೆ.