“ಪಕ್ಕೆಲುಬು” ಶಿಕ್ಷಕ ಟಿ.ಚಂದ್ರಶೇಖರಪ್ಪ ಸೇವೆಯಿಂದ ಅಮಾನತು…

1222
firstsuddi

ಹೂವಿನಹಡಗಲಿ : ಪಾಠ ಬೋಧನೆ ಮಾಡುವಾಗ ಪಕ್ಕೆಲುಬು ಎಂಬ ಪದವನ್ನು ಉಚ್ಛರಿಸಲು ವಿದ್ಯಾರ್ಥಿ ಕಷ್ಟಪಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೂವಿನಹಡಗಲಿ ತಾಲ್ಲೂಕಿನ ಕುರವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ. ಚಂದ್ರಶೇಖರಪ್ಪ ಅವರು ಈ ವೀಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕಮಗಳೂರು ಜೆಡಿಎಸ್ ಯುವ ಜನತಾದಳ ಅಧ್ಯಕ್ಷ ವಿನಯ್ ರಾಜ್ ಹಾಗೂ ಹಲವು ಸಾರ್ವಜನಿಕರು ಶಿಕ್ಷಣ ಸಚಿವರ ಫೇಸ್‍ಬುಕ್ ಖಾತೆಗೆ ಶಿಕ್ಷಕರು ಹೇಳಿಕೊಡುವ ಪಕ್ಕೆಲುಬು ಎಂಬ ಪದವನ್ನು ಉಚ್ಛರಿಸಲು ಸಾಧ್ಯವಾಗದೆ ಕಷ್ಟಪಡುವ ವೀಡಿಯೋವನ್ನು ಹಂಚಿದ್ದು, ಕೂಡಲೇ ಸ್ಪಂಧಿಸಿದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು, ವೀಡಿಯೋ ಹರಿಬಿಟ್ಟಿದ್ದ ಶಿಕ್ಷಕನ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದರು. ಅದರಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ನಾಗರಾಜ್ ಅವರು, ಶಾಲೆಗೆ ತೆರಳಿ ವಿಚಾರಣೆ ನಡೆಸಿ ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ ಚಂದ್ರಶೇಖರಪ್ಪ ಅವರನ್ನು ಅಮಾನತುಗೊಳಿಸಿದ್ದಾರೆ.