ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ಶಿಕ್ಷಕರನ್ನೇ ಥಳಿಸಿದ ವಿದ್ಯಾರ್ಥಿಗಳು!

44
firstsuddi

ರಾಂಚಿ : ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಅನುತೀರ್ಣ ಆದ ವಿದ್ಯಾರ್ಥಿಗಳು ಶಿಕ್ಷಕರನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನ ದುಮ್ಕಾ ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡದ ವಸತಿ ಶಾಲೆಯಲ್ಲಿ ಸೋಮವಾರ ನಡೆದಿದೆ.

ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ( ಜೆಎಸಿ ) ಶನಿವಾರದಂದು ಪ್ರಕಟಿಸಿದ 9ನೇ ತರಗತಿ ಪರೀಕ್ಷೆಯಲ್ಲಿ 32 ರಲ್ಲಿ 11 ವಿದ್ಯಾರ್ಥಿಗಳು ಗ್ರೇಡ್-ಡಿಡಿ (ಡಬಲ್ ಡಿ) ಅಂಕ ಪಡೆದಿದ್ದಾರೆ, ಇದು ಅನುತ್ತೀರ್ಣಕ್ಕೆ ಸಮಾನವೆಂದು ಪರಿಗಣಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಿಟ್ಟಿಗೆದ್ದು, ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ.

ಶಾಲಾ ಶಿಕ್ಷಕ ಸುಮನ್ ಕುಮಾರ್ ಹಾಗೂ ಶಾಲೆಯ ಗುಮಾಸ್ತ ಸೋನೆರಾಮ್ ಚೌರೆ ಎಂಬುವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆದರೆ ಅವರಿಬ್ಬರು ಯಾವುದೇ ದೂರು ನೀಡಿಲ್ಲ. ಅಲ್ಲದೇ ಶಾಲಾ ಆಡಳಿತ ಮಂಡಳಿ ಕೂಡ ಈ ಬಗ್ಗೆ ದೂರು ದಾಖಲಿಸಿಲ್ಲ. ಘಟನೆಯ ಪರಿಶೀಲನೆಯ ನಂತರ, ನಾನು ದೂರು ದಾಖಲಿಸಲು ಶಾಲೆಯ ಅಧಿಕಾರಿಯನ್ನು ಕೇಳಿದೆ ಆದರೆ ಅದಕ್ಕೆ ಅವರು ನಿರಾಕರಿಸಿದ್ದಾರೆ. ಈಗ ನಾವು ದೂರು ನೀಡಿದರೆ ಅದರಿಂದ ಮುಂದೆ ವಿದ್ಯಾರ್ಥಿಗಳ ಶಾಲಾ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಹೀಗಾಗಿ ದೂರು ನೀಡುವುದಿಲ್ಲ ಅಂತ ಶಿಕ್ಷಕರು ಹೇಳಿದ್ದಾರೆ ಎಂದು ಗೋಪಿಕಂದರ್ ಪೊಲೀಸ್ ಠಾಣೆಯ ಪ್ರಭಾರಿ ನಿತ್ಯಾನಂದ ಭೋಕ್ತಾ ಹೇಳಿದ್ದಾರೆ.