ಪಿಎಸ್‍ಐ ನೇಮಕಾತಿ ಹಗರಣ ; ಸಿಐಡಿ ಮುಂದೆ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಶರಣು

72
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಳೆದ 21 ದಿನಗಳಿಂದ ತಲೆಮರೆಸಿಕೊಂಡಿದ್ದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಇದೀಗ ಸ್ವತಃ ತಾವೇ ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ. ಪಿಎಸ್ಐ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಲು ಸಹಕಾರ ನೀಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಮತ್ತೋರ್ವ ಕಿಂಗ್‌ಪಿನ್, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ನಿನ್ನೆ ಸ್ವಯಂ ಪ್ರೇರಿತನಾಗಿ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ. ಇಂದು ಕಾಶಿನಾಥ ತಾವಾಗಿಯೇ ಸ್ವತಃ ಸಿಐಡಿಗೆ ಸರೆಂಡರ್ ಆಗಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಸಿಐಡಿ ಚುರುಕಿನ ತನಿಖಾ ಕಾರ್ಯಚರಣೆಯಿಂದಾಗಿ ಆರೋಪಿಗಳಲ್ಲಿ ನಡುಕ ಶುರುವಾಗಿ ತಾವಾಗಿಯೇ ಬಂದು ಶರಣಾಗತಿಯಾಗುತ್ತಿದ್ದಾರೆ ಎನ್ನಲಾಗಿದೆ.