ಪಿಎಸ್‍ಐ ಹಗರಣ – ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ ಎಂದ ಬಸವರಾಜ ದಡೇಸಗೂರು.

59
firstsuddi

ಬೆಂಗಳೂರು : ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಪಿಎಸ್ ಐ ಹಗರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನೆಲೆ ಶಾಸಕ ಬಸವರಾಜ ದಡೇಸಗೂರು ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮದಲ್ಲಿ ಬಂದಿರುವ ಆಡಿಯೋ 2020ರದ್ದು, ಈಗಿನದ್ದಲ್ಲ. ಯಾವುದೋ ಕ್ಷೇತ್ರದ ಸಮಸ್ಯೆ ಬಗೆಹರಿಸುವುದಾಗಿ ಹೇಳುವುದಾಗಿ ಮಾತನಾಡಿದ್ದೆ. ಆವಾಗ ಪಿಎಸ್ ಐ ಹಗರಣ ಇರಲಿಲ್ಲ. ಬೇರೆ ವಿಚಾರದ ಬಗ್ಗೆ ನಾನು ಮಾತಾಡಿದ್ದೆ. ಆದರೆ ನಾನು ಮಾತಾಡಿದ ಆಡಿಯೋವನ್ನು ಪಿಎಸ್ ಐ ಹಗರಣಕ್ಕೆ ಜೋಡಿಸಿದ್ದಾರೆ ಎಂದರು.

ನನ್ನ ಆಡಿಯೋ ಎಡಿಟ್ ಮಾಡಲಾಗಿದೆ. ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ಜೊತೆಗೆ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪ ಆದಾಗ ನಾನು ಉತ್ತರ ಕೊಡುತ್ತೇನೆ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅಮೃತ ಘಳಿಗೆಯಲ್ಲಿ ಆಡಿಯೋ, ವಿಡಿಯೋ ರಿಲೀಸ್ ಮಾಡುತ್ತೇನೆ ಅಂದಿದ್ದಾರೆ. ಮಾಡಲಿ ಸಮಸ್ಯೆ ಇಲ್ಲ. ನಾನು ಅದನ್ನು ಸ್ವಾಗತಿಸುತ್ತೇನೆ. ಯಾವುದೇ ಹಣ ಪಡೆದಿಲ್ಲ. ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.