ಬೆಂಗಳೂರು : ನಟ ಪುನೀತ್ ರಾಜ್ಕುಮಾರ್ ಅವರು ಮರಣದ ನಂತರ ನೇತ್ರದಾನ ಮಾಡಿದ್ದರು. ಅವರ ಕಣ್ಣಿನ ಕಾರ್ನಿಯಾದಿಂದ ನಾಲ್ವರಿಗೆ ದೃಷ್ಟಿ ಬಂದಿದೆ. ಇದೀಗ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದು, ಈ ವಿನೂತನ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ.
ಪುನೀತ್ ಅವರ ಕಣ್ಣುಗಳು ಆರೋಗ್ಯವಾಗಿರುವುದರಿಂದ ಸ್ಟೆಮ್ ಸೆಲ್ಸ್ ಗಳನ್ನು ಬಳಸಿ ಇನ್ನೂ 10 ಅಂಧರಿಗೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯವು ಮುಂದಾಗಿದೆ. ಪಟಾಕಿ ಅಥವಾ ಇನ್ನಿತರ ಅಪಘಾತಗಳಲ್ಲಿ ದೃಷ್ಟಿ ಕಳೆದುಕೊಂಡವರಿಗೆ ಸ್ಟೆಮ್ ಸೆಲ್ಸ್ ಬಳಕೆ ಮಾಡಬಹುದು. ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯಾ ಮತ್ತು ಸ್ಟೆಮ್ ಸೆಲ್ ಎರಡನ್ನು ಬಳಕೆ ಮಾಡಿಕೊಂಡು ದೃಷ್ಟಿ ನೀಡಲಾಗುತ್ತಿದೆ.
ಸದ್ಯ ಪುನೀತ್ ರಾಜ್ ಕುಮಾರ್ ಅವರ ಕಣ್ಣಿನ ಬಿಳಿ ಗುಡ್ಡೆಯಿಂದ ಸ್ಟೆಮ್ ಸೆಲ್ ಗಳನ್ನ ಸಂಗ್ರಹ ಮಾಡಲಾಗಿದ್ದು, ಸ್ಟೆಮ್ ಸೆಲ್ ಗಳ ಬಳಕೆಯಿಂದ ಅಂಧರಿಗೆ ದೃಷ್ಟಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ನಾರಾಯಣ ನೇತ್ರಾಲಯ ವೈದ್ಯರು ತಿಳಿಸಿದ್ದಾರೆ.










