ಕೊಟ್ಟಿಗೆಹಾರ : ನಿನ್ನೆ ನಿಧನರಾದ ಚಿತ್ರನಟ ಪುನೀತ್ ರಾಜಕುಮಾರ್ ಅವರಿಗೆ ಕೊಟ್ಟಿಗೆಹಾರ ಸೇರಿದಂತೆ ವಿವಿದೆಡೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕೊಟ್ಟಿಗೆಹಾರದ ಸ್ಪೂರ್ತಿ ಮಿತ್ರ ಮಂಡಳಿಯ ಗ್ರಂಥಾಲಯದಲ್ಲಿ ನಿನ್ನೆ ಸಂಜೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಪುನೀತ್ ಅವರು ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆಯೂ ಕೂಡ ಇಷ್ಟವಾಗುವ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರು ಸಿನಿಮಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ರಾಜಕುಮಾರ್ ಅವರ ವ್ಯಕ್ತಿತ್ವದ ಪಡಿಅಚ್ಚಿನಂತಿದ್ದ ಪುನೀತ್ ಅವರು ಸರಳ ಸಜ್ಜನಿಕೆಯಿಂದ ಕೂಡ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಬಕ್ಕಿ ಮಂಜುನಾಥ್, ಕಸಾಪ ಹೋಬಳಿ ಮಾಜಿ ಅಧ್ಯಕ್ಷ ವಸಂತ್ ಹಾರ್‍ಗೋಡು, ಗ್ರಾಮದ ಹಿರಿಯರಾದ ಖಾದರ್, ಸಂಸ್ಕøತಿ ಚಿಂತಕ ಪಿ.ಕೆ ಮಂಜುನಾಥ್, ಕಾಂಗ್ರೇಸ್ ಮುಖಂಡ ಪ್ರಭಾಕರ್ ಬಿನ್ನಡಿ, ಯುವ ಸಾಹಿತಿ ಹೆಸಗಲ್ ವೆಂಕಟೇಶ್, ಸ್ಥಳೀಯರಾದ ಗೋಪಾಲ್, ಶಮಂತ್, ಸಿದ್ದಿಕ್ ಇದ್ದರು.

ನಿಡುವಾಳೆ ಗ್ರಾಮದಲ್ಲಿ ದಿವ್ಯಜ್ಯೋತಿ ಕಲಾ ಸಂಘ, ಮಹಾಗಣಪತಿ ಸೇವಾಸಮಿತಿ ವತಿಯಿಂದ ಮೇಣದ ಬತ್ತಿ ಬೆಳಗುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಗ್ರಾಮದ ಹಿರಿಯರಾದ ದಿನೇಶ್, ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ ಪ್ರವೀಣ್ ಮಾಸ್ಟರ್, ಮಾಜಿ ಅದ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಜಿನ್ನು, ಖಜಾಂಚಿ ಹರೀಶ್, ಸಾಂಸ್ಕøತಿಕ ಕಾರ್ಯದರ್ಶಿ ಸುನೀಲ್, ಮುಂತದವರು ಇದ್ದರು.

ಕೆಳಗೂರಿನಲ್ಲಿ ಎಐವೈಎಪ್ ವತಿಯಿಂದ ಮೇಣದ ಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಎಐವೈಎಪ್ ಕೆಳಗೂರು ಶಾಖೆಯ ಅಧ್ಯಕ್ಷರು ಪಧಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು. ಬಕ್ಕಿ ಗ್ರಾಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಗ್ರಾಮದ ಮುಕಂಡರಾದ ನಾಗೇಶ್, ಗ್ರಾಮಸ್ಥರಾದ ಪ್ರಕಾಶ್, ಕುಮಾರ್, ಸಚಿನ್, ರವೀಂದ್ರ, ಅಭಿ, ರಮೆಶ್, ಕೀರ್ತಿ, ರಾಧಾ, ಅನಿಲ್, ದಿಲೀಪ್, ನಯನ್, ಪ್ರಸನ್ನ, ಜೀವನ್, ಚಂದ್ರಯ್ಯ, ಗೋಪಾಲ್, ಲಕ್ಷ್ಮಿ ಮುಂತಾದವರು ಇದ್ದರು.










