ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿದ್ಯಾರ್ಥಿಗಳಿಂದ ವಿಷೇಶ ಪೂಜೆ…

170
firstsuddi

ಬಾಗಲಕೋಟೆ : ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಅಖಿಲ ಭಾರತ ಮಧ್ವಮಂಹಾಮಂಡಳದ ವಸತಿ ನಿಲಯದ ವಿದ್ಯಾರ್ಥಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಿಲ್ಲೆಯ ನವನಗರದ 8ನೇ ಸೆಕ್ಟರ್‍ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ಪಾರಾಯಣ, ಶ್ರೀಕೃಷ್ಣ ಪೂಜೆ, ವಿಷ್ಣು ಸಹಸ್ರನಾಮ, ಧನ್ವಂತರಿ ಜಪ, ಸುಳಾದಿಗಳು, ರಾಯರ ಸ್ತೋತ್ರ ಪಾರಾಯಣ ಮಾಡಿ ಶ್ರೀಗಳ ಆರೋಗ್ಯ ಶೀಘ್ರ ಗುಣವಾಗಲಿ ಎಂದು ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು.