ಪೌರತ್ವ ಕಿಚ್ಚು-ಪ್ರತಿಭಟನೆ ಸ್ಥಳದಲ್ಲಿದ್ದ ಈಚರ್ ವಾಹನಕ್ಕೆ ಬೆಂಕಿ…

180
firstsuddi

ಕೊಣಾಜೆ: ಪೌರತ್ವ ಕಾಯ್ದೆಯ ವಿರುದ್ದ ಭಾನುವಾರ ದೇರಳಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಬಳಿಕ ಅಲ್ಲಿ ನಿಲ್ಲಿಸಲಾಗಿದ್ದ ಈಚರ್ ವಾಹನಕ್ಕೆ ಮಧ್ಯರಾತ್ರಿ ಬೆಂಕಿ ಬಿದ್ದು ವಾಹನ ಸಂಪೂರ್ಣ ಭಸ್ಮವಾಗಿದೆ. ಈಚರ್ ವಾಹನದಲ್ಲಿ ಪ್ರತಿಭಟನಾ ಮೈದಾನದಲ್ಲಿದ್ದ ಕುರ್ಚಿ ಗಳನ್ನು ತುಂಬಿಸಲಾಗಿತ್ತು ಎನ್ನಲಾಗಿದೆ. ಆದರೆ ಮಧ್ಯರಾತ್ರಿಯ ವೇಳೆ ವಾಹನ ಬೆಂಕಿಗಹುತಿಯಾಗಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ.